ಬುಧವಾರ, ಅಕ್ಟೋಬರ್ 3, 2018
💙 ಕ್ರಷ್ 💔 -->ಪ್ರೀತಿಗೆ ಹತ್ತಿರದ ಅನುಭವ..! ~ ~ ~ ~ ~ ~ ~ #ರಾju ಕ್ರಷ್..! ಆ ಕ್ಷಣದ ಸೆಳೆತ,ಒಬ್ಬರೆಡೆಗಿನ ಆಕರ್ಷಣೆ,ವ್ಯಾಮೋಹ,ಸ್ವಲ್ಪ ಹುಚ್ಚುತನ,ಸಣ್ಣ ಸಮಯದ ಗೆಳೆತನ,ನೋವಿಗೆ ಸಾಂತ್ವಾನ,ಗೆಲುವಿನ ಆಮಂತ್ರಣ,ಹ್ರದಯದ ಹೆಚ್ಚುವರಿ ಬಡಿತ,ಏರಿಳಿತ,ತುಡಿತ,ಇವೆಲ್ಲವುಗಳ ಒಟ್ಟು ರೂಪವೇ ಕ್ರಷ್..! ಒಬ್ಬ ವ್ಯಕ್ತಿಯ ನಡೆ:ನುಡಿ,ಅವನು ಮಾತನಾಡುವ ಭಾಷೆಯ ಶೈಲಿ,ಅವನು/ಳು ನಿಮ್ಮ ಬಗ್ಗೆ ತೋರುವಂತೆ ಕಾಣುವ ವಿಶೇಷ ಕಾಳಜಿ,ಎಲ್ಲರೊಂದಿಗೂ ಬೆರೆಯುವ ರೀತಿ,ಧರಿಸುವ ಉಡುಪು,ಅವನಲ್ಲಿರುವ ಸರಳತೆ,ಶಿಸ್ತು,ಅವಳ ಕೋಮಲ ನಗು,ಮುಗ್ಧತೆ,ಅವಳ ಕುಡಿ ನೋಟ,ಅವನ ಅಚ್ಚುಕಟ್ಟಾದ ಬರವಣಿಗೆ,ದೈಹಿಕ ತೋಳ್ಬಲ,ಹುಚ್ಚುತನ...! ಇಂತಹುಗಳೆಲ್ಲರದೆಡೆಗೆ ಮನಸ್ಸಿನ ಭಾವನೆಗಳು ಬೆಸೆದು ಕೊಂಡು,"ಕ್ರಷ" ಎಂಬ Feeling ನ್ನು ನಮ್ಮಲ್ಲಿ ಹುಟ್ಟು ಹಾಕುತ್ತವೆ..! "ಕ್ರಷ್"ನ ಸೆಳೆತಕ್ಕೆ ನೀವು ಒಳಗಾಗಿರಬಹುದು..! ~ ~ ~ ~ ~ ~ #ರಾju ಸಾಮಾನ್ಯವಾಗಿ ಹುಡುಗಿಯರು... ಹುಡುಗರಿಗಿಂತ,ಬೇಗನೇ ಕ್ರಷ್ ನ ಸೆಳೆತಕ್ಕೆ ಒಳಗಾಗುತ್ತಾರೆ.ನೀವು ಯಾರ ವ್ಯಕ್ತಿಯ ಕಡೆಗೆ ವ್ಯಾಮೋಹ,ಆಕರ್ಷಿತರಾಗಿದ್ದೀರೋ...ಅವರನ್ನು ಕಂಡಾಗ,ಅವರು ಬೇರೆಯವರೊಂದಿಗೆ ಸಲುಗೆಯಿಂದ ನಡೆದು ಕೊಂಡಾಗ,ಅವರ ಬಗ್ಗೆ ಬೇರೆಯವರ ಅನಿಸಿಕೆ ಏನಿರಬಹುದೆಂಬ ಕುತೂಹಲಗಳಿಂದ ಆಗುವ ನಿಮ್ಮ ಭಾವನೆಗಳಲ್ಲಿನ ಏರಿಳಿತಗಳು ನೀವೂ ಕ್ರಷ್ ಗೆ ಒಳಗಾಗಿದ್ದೀರೆಂಬ ಸೂಚನೆಯನ್ನು ನೀಡುತ್ತವೆ. 'ಕ್ರಷ್' ನ ಅನುಭವ ನಮಗೆ ಮೂರು ರೀತಿಯಿಂದ ಆಗಬಹುದು. ಮೊದಲನೆಯದಾಗಿ,ಒಂದು ಗುಂಪಿನಲ್ಲಿದ್ದಾಗ ನಮ್ಮನ್ನು ಯಾರಾದರೂ ಗುರುತಿಸಲಿ ಎಂಬ ಆತುರದಿಂದಲೋ...! ಆ ಗುಂಪಿನಲ್ಲಿರುವ ಒಬ್ಬರನ್ನುವ ನಿಮ್ಮ "ಕ್ರಷ್" ಯಂದು ಬಿಂಬಿಸಲು ಪ್ರಾರಂಭಿಸುತ್ತೀರಾ.ಅದರ ಉದ್ಧೇಶ ಆ ಕ್ಷಣಕ್ಕೆ ನಿಮ್ಮನ್ನು ನೀವು Comfort ಆಗಿ ಇಟ್ಟುಕೊಳ್ಳಬೇಕು ಅನ್ನುವುದಷ್ಟೇ ಇರುತ್ತದೆ.ಇಲ್ಲಿ ಸ್ನೇಹದ ಹೊರತಾಗಿ ಅವರೆಡೆಗೆ ಯಾವ ಸೆಳೆತವೂ ನಿಮಗೆ ಇರುವುದಿಲ್ಲ. ಎರಡನೇಯದಾಗಿ ನೀವು ಆರಾಧಿಸುವ ವ್ಯಕ್ತಿಗಳೆಡೆಗೆ ಆಗುವ ಕ್ರಷ್..! ಇಲ್ಲಿ ನೀವು ನಿಮ್ಮ ಹಾವ,ಭಾವ,ವ್ಯಕ್ತಿತ್ವ,ನಿಮ್ಮ ನಿಲುವು,ಇಷ್ಟಾರ್ಥಗಳನ್ನು..ನೀವು ಆರಾಧಿಸು ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಿ,ಅವರಲ್ಲಿ ನಿಮ್ಮನ್ನು ಕಾಣಲು ಬಯಸುತ್ತೀರಾ.ಉಧಾ:-ಸಿನೆಮಾ ತಾರೆಯರು,ಮಾಡೆಲ್ ಗಳು,ಲೇಖಕರು,ಮುಂತಾದವರು.ಇವರೊಂದಿಗೆ ನೀವು ನೇರವಾಗಿ ಸಂಪರ್ಕ ಹೊಂದಿಲ್ಲದಿದ್ದರೂ...ಗೋಡೆಗೆ ಅವರ ಭಾವಚಿತ್ರವನ್ನು ಅಂಟಿಸುವುದು,Whatsapp,Facebook ನಂತಹ ಸಾಮಾಜಿಕ ಜಾಲತಾಣಗಳಲ್ಲಿ Dp, ಪ್ರೋಫೈಲ್ ಪಿಕ್ಚರ್ ನನ್ನಾಗಿಸಿಕೊಳ್ಳುವುದರಿಂದ ವ್ಯವಹಾರಿಕವಾಗಿ ಲಾಭದ ಜೊತೆಗೆ ಅವರಿಗೆ ಮತ್ತಷ್ಟು ಹೆಸರನ್ನು ಈ ತರದ ಕ್ರಷ್ ತಂದು ಕೊಡುತ್ತದೆ. ಈ 'ಕ್ರಷ್' ಅನ್ನುವುದು ಪ್ರೀತಿಗೆ ಹತ್ತಿರದ ಮೊದಲ ಅನುಭವ...ಅಂತಲೇ ಹೇಳಬಹುದು.ಒಬ್ಬ ವ್ಯಕ್ತಿಯ ಸಾಂಗತ್ಯ ಬಯಸುವುದು,ಅವರೊಂದಿಗೆ ಹೆಚ್ಚು ಹೊತ್ತು ಕಳೆಯಬೇಕೆಂದು ಅನ್ನಿಸುವುವಂತಹ ಸಣ್ಣ ಸಣ್ಣ ಸುಳಿವುಗಳನ್ನು ಈ ಕ್ರಷ್ ಅನ್ನುವುದು ಹುಟ್ಟು ಹಾಕಿರುತ್ತದೆ.ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿಯನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುವುದೇ "ರೋಮ್ಯಾಂಟಿಕ್ ಕ್ರಷ್"..! ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಯೋಚನೆಯಲ್ಲಿ ಪಕ್ವವಾಗುವುದು ಅವಶ್ಯಕ.ಏಕೆಂದರೆ,ಈ ಕ್ರಷ್ ನ ಹೆಸರಲ್ಲಿ ನಂಬಿಕೆಯನ್ನು ಬೆಳೆಸಿಕೊಂಡ ಎಷ್ಟೋ ಜನರ ಪ್ರೀತಿ.. ನಿಸ್ಸಹಾಯಕವಾಗಿ ಕೈ ಚಲ್ಲಿ ಕುಳಿತಕೊಂಡ ಉಧಾಹರಣೆಗಳೇ ಹೆಚ್ಚು..! "ಕ್ರಷ್" ನ ಕಾಲಾವಧಿ ಎಷ್ಟು...? ~ ~ ~ ~ ~ ~ ~ #ರಾju ಒಂದು ಸಮೀಕ್ಷೆಯ ಪ್ರಕಾರ,ಈ ಕ್ರಷ್ ನ ಕಾಲಾವಧಿ ನಾಲ್ಕು ತಿಂಗಳುಗಳ ವರೆಗೆ ಮಾತ್ರವಂತೆ.ಎಷ್ಟೋ ಸಲ ಈ ಕ್ರಷ್ ಅನ್ನುವುದು,One sided ಪ್ರೀತಿಯ ಅರ್ಧ ಭಾಗವಷ್ಟೇ ಕೆಲಸ ಮಾಡಿರುತ್ತದೆ. ನಾವು ಯಾರನ್ನು ಆರಾಧಿಸುತ್ತೇಯೋ..! ಯಾರ ಆಕರ್ಷಣೆ/ವ್ಯಾಮೋಹಕ್ಕೆ ಒಳಗಾಗಿರುತ್ತೆಯೋ..! ಅವರೊಂದಿಗೆ ಹೇಳಿಕೊಳ್ಳಲು ಆಗದೆ, ಅವಮಾನ ಅಥವಾ ತಿರಸ್ಕಾರಕ್ಕೆ ಒಳಗಾಗಿ ಬಿಟ್ಟೆವೆಂಬ ಭಯದಿಂದಲೋ..! ನೀವು ಅವರ ಮೇಲಿಟ್ಟ ನಂಬಿಕೆ ಹುಸಿಯಾಗಿದ್ದರಿಂದಲೋ..! ಸಮಯಕ್ಕೆ ತಕ್ಕಂತೆ ನಿಮ್ಮ ನಿರೀಕ್ಷೆಗಳು ಬದಲಾದ ಕಾರಣಕ್ಕೋ..! "ಕ್ರಷ್" ಅನ್ನುವುದು ತನ್ನ ವರ್ಚಸ್ಸನ್ನು ಕಳೆದುಕೊಂಡು ಬಿಡುತ್ತದೆ..! ಆದರೆ,ಯಾವ ಕಾರಣಕ್ಕೆ ಒಂದು ಹುಡುಗಿ ಅಥವಾ ಹುಡುಗನೆಡೆಗೆ ನಿಮಗೆ ಆಕರ್ಷಣೆ/ವ್ಯಾಮೋಹ ಹುಟ್ಟಿಕೊಂಡಿರುತ್ತದೆಯೋ..! ಕೊನೆಯವರೆಗೂ ಅದನ್ನು ನಿಭಾಯಿಸಿಕೊಳ್ಳುವಷ್ಟು ಪ್ರಬುಧ್ಧರಾಗಿದ್ದರೆ...ಅವರೊಂದಿಗೆ ನೀವು ಪ್ರೀತಿಯಲ್ಲಿ ಬಿದ್ದೀರುತ್ತೀರಾ..👍
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ