ಕಣ್ಣು ಹೊಡೆದು..😉 ಈ ಹುಡುಗಿ ಮಾಡಿದ್ದಾದರೂ ಏನು..😛
#PriyaVarrier👇#ರಾju
ಕಣ್ಣು ಹೊಡೆಯುವುದು ಅಂದರೆ ಏನೋ ಒಂದು ರೀತಿ ಭಾವನೆಗಳಲ್ಲಿ ಪುಳಕ.
ಅದು ಸಾಮಾನ್ಯವಾಗಿ ಪ್ರೀತಿಯನ್ನು ಆಹ್ವಾನಿಸುವ, ಒಪ್ಪಿಗೆಯನ್ನು ಸೂಚಿಸುವ, ಖಾತ್ರಿ ಪಡಿಸುವ, ಪ್ರೇಮಿಗಳ ನಡುವೆಯೇ ಬಹುಪಾಲು ಸಂಭವಿಸುವ ಸಂವಹನದ ಅಮೌಖಿಕ ಭಾಷೆಯಾಗಿದೆ.
ಮನುಷ್ಯನ ಇಂದ್ರೀಯಗಳಲ್ಲಿಯೇ... ಪರಸ್ಪರ ಸಂದೇಶಗಳನ್ನು ರವಾನಿಸುವಲ್ಲಿ, ಪ್ರೇಮಿಯನ್ನು ನಿಮ್ಮತ್ತ ಸೆಳೆಯಲು,ಸಾಂಗತ್ಯದ ನಿರೀಕ್ಷೆಯಲ್ಲಿದ್ದಾಗ...! ನಿಮಗೆ ನೆರವು ನೀಡುವಲ್ಲಿ ದೇಹದ ಭಾಷೆಯಾಗಿ "ಕಣ್ಣು" ಪ್ರಮುಖ ಪಾತ್ರ ವಹಿಸಿದೆ. ಸಂವಹನದ ಅರ್ಥವು ಕಳಿಸುವವರ ಮತ್ತು ಸ್ವೀಕರಿಸುವ ಜನರ ಸಾಮರ್ಥ್ಯದಲ್ಲಿಯ ವಿಭಿನ್ಯತೆ ಮತ್ತು ಅವರ ಸಂದರ್ಭ-ಪರಿಸ್ಥಿತಿಯ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದ ಈ ಕಣ್ಣು ಹೊಡೆಯುವುದು....ಸ್ನೇಹ ಮನೋಭಾವದಿಂದ ಇರಬಹುದು, ಕೆಲವೊಬ್ಬರಿಗೆ ಪ್ಲರ್ಟ ಅನ್ನಿಸಬಹುದು, ಮುಜುಗರ ತರಬಹುದು, ಅಥವಾ ತಮಾಸೆಯಾಗಿರಲೂ ಬಹುದು .
ಆದರೆ,ಈ ಹುಡುಗಿ ಕಣ್ಣು ಹೊಡೆದು ಬಿಟ್ಟಳಲ್ಲಾ..! ಅದು ಮಾತ್ರ ಸಾರ್ವತ್ರಿಕ ಭಾಷೆಯಾಗಿ ಹೋಯಿತು.ಕೇವಲ ಅವಳ ಮತ್ತು ತನ್ನ ಗೆಳೆಯನ ನಡುವಿನ ಪ್ರೀತಿಯ ಸಾಂಗತ್ಯಕ್ಕೆ ಸಾಕ್ಷಿಯಾಗ ಬೇಕಿದ್ದ ,ಇವಳು ಕಣ್ಣು ಹೊಡೆದ ರೀತಿ ಮತ್ತು ಹುಬ್ಬು ಹಾರಿಸಿದ್ದು, ಇಂದು ಸಾಮಾಜಿಕವಾಗಿ,ಸಾಂಪ್ರದಾಯಕ ಹಬ್ಬವಾಗಿ ಬಿಟ್ಟಿತು.
ಸಾಮಾನ್ಯವಾಗಿ ಗಮನಿಸಿದಾಗ,ಒಂದು ಹುಡುಗಿ...ಹುಡುಗನಿಗೆ ಕಣ್ಣು ಹೊಡೆದಾಗ, ಸುತ್ತಮುತ್ತಲಿನ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದೇ ಒಂದು ಕುತೂಹಲ. ಕಣ್ಣುಗಡ್ಡೆಯ ರಕ್ಷಣೆಗಾಗಿ.. ಕಣ್ಣು ಮಿಟುಕಿಸುವುದು ಮನುಷ್ಯನಲ್ಲಿರುವ ಸಾಮಾನ್ಯ ನಡವಳಿಕೆ. ಆದರೆ,ಅದರ ಸಮಯವನ್ನು ಸ್ವಲ್ಪ ಹೆಚ್ಚಿಸಿ,ಅದನ್ನು ಒಂದು ಕಣ್ಣಿಗಷ್ಟೇ ಸೀಮಿತಗೊಳಿಸಿದರೆ... ಅದು,ಕಣ್ಣು ಹೊಡೆಯುವುದರ ರೂಪ ಪಡೆದುಕೊಳ್ಳುತ್ತದೆ.ಅಂದರೆ ಕಣ್ಣು ಹೊಡೆಯುವುದು ಒಂದು ತಂತ್ರ. ಮನುಷ್ಯನಲ್ಲಿಯ ಭಾವನೆಗಳನ್ನು ಹೈಜಾಕ್ ಮಾಡಿ,ಕಾಲ್ಪನಿಕವಾಗಿ ಅವನನ್ನು ತಲ್ಲಣಗೊಳಿಸುವ ಸನ್ನೆ.
ಇಂದು ಈ ಹುಡುಗಿ ಸಾಮಾಜಿಕವಾಗಿ ಇಷ್ಟು ವೈರಲ್ ಆಗಲು ಕಾರಣ... ಇದೆ ಒಂದು ಕಣ್ಣ ಸನ್ನೆ. ಸಣ್ಣಗೆ ತೀಡಿದ ಹುಬ್ಬನ್ನು ಹಾರಿಸಿ,ಎಡಗಣ್ಣನ್ನು ಧೀರ್ಘವಾಗಿ ಮಿಟುಕಿಸಿ ಬಿಟ್ಟಳಲ್ಲಾ...! ಇದು ಎಲ್ಲರನ್ನೂ ಭಾವನಾತ್ಮಕವಾಗಿ ಹಿಡಿದಿಟ್ಟು ಕೊಂಡಿತು. ಎಷ್ಟೋ ಜನರಿಗೆ ಅದರಲ್ಲಿಯ ಮುಗ್ಧತೆ ... ಹಳೆಯ ದಿನಗಳ "ಮೊದಲ ಪ್ರೀತಿ"ಯನ್ನು ನೆನಪಿಸುವಂತೆ ಮಾಡಿದ್ದಲ್ಲದೇ... ಈಗಿನ ಕಾಲದ #NettiZens ಗಳಿಗೆ ರಾತ್ರೋರಾತ್ರಿ ಆರೋಗ್ಯಕರ ವಿಷಯದ ಆಹಾರವಾಗಿ ಬಿಟ್ಟಳು.
ಆದ್ದರಿಂದ ನಮಗಾಗಿ ಕಣ್ಣು ಮಿಟುಕಿಸುವುದು ಇದ್ದೇ ಇದೆ...! ಒಂದು ಸಾರಿ ಯಾರಿಗಾದರೂ ಕಣ್ಣು ಹೊಡೆದು ನೋಡಿ...ದೇಶ ಬದಲಾದರೂ ಆಗಬಹುದು.. #ರಾಗಿಬಾ
ಶುಕ್ರವಾರ, ಮಾರ್ಚ್ 16, 2018
ಪ್ರೀಯಾ ವಾರಿಯರ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ