ಸಾಮಾನ್ಯ ವ್ಯಕ್ತಿಯ ಜೀವನ; #PadMan ಎಂಬ ಅದ್ಭುತ ಚಿತ್ರ ಆಯಿತು..!
#BollyWood * * * * #ರಾju
Batman Spiderman superMan ಎಂಬ ಹೆಸರುಗಳನ್ನು ನೀವು ಕೇಳಿರಬಹುದು.ಆದರೆ ಇಂದು, ತನ್ನ ಬದುಕಿನಲ್ಲಿ ಸಂಭವಿಸಿದ ಸಣ್ಣದೊಂದು ಘಟನೆಯನ್ನೇ ಸವಾಲಾಗಿ ಸ್ವೀಕರಿಸಿ...ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದವನ ಜೀವನ ಕಥೆ ಬಾಲಿವುಡ್ ನಲ್ಲಿ ಒಂದು ಚಿತ್ರವಾಗಿ ತೆರೆಯ ಮೇಲೆ ಮೂಡಿ ಬರುತ್ತಿದೆ... ಅದೇ...#PadMan
ಅದೊಂದು ಬಡ ಕುಟುಂಬ. ದಿನದ ಖರ್ಚನ್ನೆ ಸಂಬಾಳಿಸುವುದು ಕಷ್ಟ.ಆದರೆ ಸಂತೋಷಕ್ಕೆನೂ ಕೊರತೆ ಇಲ್ಲ.ಎಂತಹ ವಿಷವನ್ನೂ ಶೇರ್ ಮಾಡಿಕೊಳ್ಳುವ ಸುಖಿ ಕುಟುಂಬ. ಅದೊಂದು ದಿನ ಹೆಂಡತಿ ತನ್ನಿಂದ ಏನನ್ನೋ ಬಚ್ಚಿಟ್ಟುಕೊಂಡು ಹೋಗುತ್ತಿದ್ದಾಳೆ ಎಂದು ಅವನಿಗೆ ಅನ್ನಿಸುತ್ತದೆ. ಕೈಯಲ್ಲಿ ಏನದು..? ಕೊಡು ನೋಡೋಣಯಂದು ಕೇಳುತ್ತಾನೆ.ಅವಳು ಕೊಡಲು ನಿರಾಕರಿಸುತ್ತಾಳೆ. ಅವನು ಮತ್ತೆ ಮತ್ತೇ ಕೇಳಿ ನೋಡಿದಾಗ ಅದೊಂದು ಹೊಲಸಾದ ಬಟ್ಟೆ.ಹೆಂಡತಿ "ರೀ ನೀವು ಅದನ್ನು ಮುಟ್ಟಬಾರದು "ಎಂದು ಹೇಳುತ್ತಾಳೆ. ಆಗ ಅವನು "ಏನಿದು ಇಷ್ಟೊಂದು ಹೊಲಸು ಬಟ್ಟೆಯನ್ನು ಏಕೆ ಉಪಯೋಗಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಆಗ ಅವಳು "ಇವತ್ತು ನನಗೆ ಮುಟ್ಟಿನ ಸಮಯ ಎಂದು ಹೇಳುತ್ತಾಳೆ. ಆಗ ಅವನು... ಸ್ವಚ್ಚವಾದ ಒಳ್ಳೆಯ ಬಟ್ಟೆಯನ್ನು ಉಪಯೋಗಿಸಬಹುದಲ್ಲಾ ಎಂದು ಕೇಳುತ್ತಾನೆ.ಅದಕ್ಕವಳು ಹಾಗಾದರೆ ಅಂಗಡಿಗೆ ಹೋಗಿ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾಳೆ.ಒಂದು ದಿನ ಆತ ಅಂಗಡಿಗೆ ಅದನ್ನು ಖರೀದಿಸಲು ಹೋದಾಗ ಅದರ ಬೆಲೆ ನೋಡಿ ಗಾಬರಿಗೊಳ್ಳುತ್ತಾನೆ. ದಿನದ ಖರ್ಚಿಗೆನೇ ಲೆಕ್ಕ ಹಾಕುವ ತಾನು ಅದನ್ನು ಖರೀದಿಸುವುದು ಅವನಿಗೆ ಕಷ್ಟವಾಗುತ್ತದೆ .
ಕೆಲವು ದಿನಗಳನ್ನು ಯೋಚಿಸಿದ ಆತ...ತನ್ನ ಹೆಂಡಿತಿಗಿಂತಲೂ,ಬೇರೆ ಹೆಣ್ಣು ಮಕ್ಕಳು "ಆ ದಿನಗಳನ್ನು" ಕಳೆಯಲು ತುಂಬಾ ಕಷ್ಟ ಪಡುತ್ತಿದ್ದಾರೆಂದು ಅವನಿಗೆ ಗೊತ್ತಾಗುತ್ತದೆ.ತಾನೇ ಅದನ್ನು ಸ್ವತಃ ಉತ್ಪಾದಿಸಲು ನಿರ್ಧರಿಸುತ್ತಾನೆ. ಮೊದ ಮೊದಲು ತನ್ನ ಕುಟುಂಬದವರಿಂದ ಮತ್ತು ನೆರೆ ಹೊರೆಯವರಿಂದ ವ್ಯಾಪಕ ಟೀಕೆಗೆ ಒಳಗಾಗುತ್ತಾನೆ.ಅದಕ್ಕೆ ಬೇಕಾದ ಒಳ್ಳೆಯ ಗುಣಮಟ್ಟದ ಕಡಿಮೆ ಬೆಲೆಯ ಕಚ್ವಾ ವಸ್ತುಗಳಿಗಾಗಿ Research ಮಾಡುತ್ತಾನೆ. ನೇಕಾರರ ಕುಟುಂಬದಿಂದ ಬಂದ ಆತ ನಾಲ್ಕು ವರುಷದ ಸತತ ಪ್ರಯತ್ನದಿಂದ ಅದನ್ನು ಸುಲಭವಾಗಿ ತಯಾರಿಸಬಲ್ಲ ಮಶೀನ್ನ್ ನ್ನು ಸಿದ್ದಪಡಿಸುತ್ತಾನೆ. ಇಂದು ಅವನು "The Menstrual Man" ಎಂದೇ ಪ್ರಸೀದ್ಧಿ ಆಗಿದ್ದಾನೆ.
ನಿಜ..! ಭಾರತದಂತಹ ದೇಶದ ಎಷ್ಟೋ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ತಿಂಗಳ ಸಮಸ್ಯೆಯಂಬುವುದು "ಸಾಮಾಜಿಕ" "ವಯಕ್ತಿಕ"ಮತ್ತು ನೈರ್ಮಲ್ಯದ ದ್ರಷ್ಟಿಯಿಂದ ತುಂಬಾ ಸೂಕ್ಷ್ಮ ವಿಚಾರವೆಂದೇ ಪರಿಗಣಿಸಿದೆ.ಇಂತಹ ಅವರ ಸಂಕಟವನ್ನೇ ಸವಾಲಾಗಿ ಸ್ವೀಕರಿಸಿ,ಇಡೀ ಮಾರುಕಟ್ಟೆಗೆ ಶಡ್ಡು ಹೊಡೆದು,ದೇಶಿಯವಾಗಿ ಉತ್ಪಾದಿಸಿದ #SanitoryPad ಗಳನ್ನು ಮಾರುಕಟ್ಟೆಗಿಂತಲೂ 3 ರಷ್ಟು ಕಡಿಮೆ ಬೆಲೆಯಲ್ಲಿ ಒದಗಿಸುತ್ತಿರುವ ವ್ಯಕ್ತಿ..ಕೊಯಿಮುತ್ತೂರಿನ "ಅರುಣಾಚಲಂ ಮುರುಗನಾಥಂ"!
ಭಾರತದ 29 ರಾಜ್ಯಗಳಲ್ಲಿ.. ಇಂದು ತಾವು ತಯಾರಿಸಿದ ಮಶೀನಿನಿಂದ, ಕಡಿಮೆ ಬೆಲೆಯ,ಒಳ್ಳೆಯ ಗುಣಮಟ್ಟದ Sanitory Pad ಳನ್ನು ಉತ್ಪಾದಿಸುವುದರ ಜೊತೆಗೆ ಎಷ್ಟೋ ಹೆಣ್ಣು ಮಕ್ಕಳಿಗೆ ಉದ್ಯೋಗ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿ 106 ದೇಶಗಳಿಗೆ ಇದನ್ನು ವಿಸ್ತರಿಸುವ ಯೋಚನೆ ಇವರದ್ದು.ಈಗಾಗಲೇ #TouchFree, #NaariSurksha, #DayFree #SecureSakhee, #BeCool ಎಂಬ ಹೆಸರಿನಲ್ಲಿ ಕೋಟಿ ಹೆಣ್ಣು ಮಕ್ಕಳು ಇವರ ಈ ದೇಶಿ ಉತ್ಪನ್ನಗಳನ್ನು ಬಳಸುತ್ತಿದ್ದಾರೆ.
ಇವರ ಈ ಸಮಾಜ ಮುಖಿ ಕಾರ್ಯವನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ 2016 ರಲ್ಲಿ #ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಭಾನುವಾರ, ಜನವರಿ 28, 2018
ಸಾಮಾನ್ಯ ಮನುಷ್ಯನ ಜೀವನದಲ್ಲಿ ನಡೆದ ಘಟನೆ:#PadMan ಎಂಬ ಅದ್ಭುತ ಚಿತ್ರ ಆಯಿತು..!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ