ಶುಕ್ರವಾರ, ಜನವರಿ 11, 2013

"ಪ್ರೀತಿಯ ಜೋಕಾಲಿ"

ಪ್ರೀತಿಯ ಹುಡುಗಿ,
    ನಾನು ಒಬ್ಬಂಟಿ ನಿಜ.ಆದರೂ ಆ ಒಂಟಿತನದಲ್ಲಿ ನಿನ್ನ ನೆನಪುಗಳು ನನ್ನನ್ನು ಕಾಡುತ್ತವೆ.ಅದಕ್ಕೆ ನಾನು ಸಂತೋಷಿ.ಸ್ವಚ್ಹಂದವಾಗಿ ನದಿಯ ನೀರಿನಲ್ಲಿ ಮೀನಿನಂತೆ ವಿಹರಿಸುತ್ತಿದ್ದವನನ್ನು,ನಿನ್ನ ಪ್ರ್ರೀತಿಯೆಂಬ ಜಾರಿನಲ್ಲಿ ನನ್ನನ್ನು ಬಂಧಿಸಿಬಿಟ್ಟೆ.ಅದಕ್ಕೆ ಈಗ ನಿನ್ನ ಪ್ರೀತಿಯೋಂದು ಬಿಟ್ಟು  ಯಾವ ಯೋಚನಯೂ ಇಲ್ಲ ನಾನೇನು ಮಾಡಲಿ,ನನ್ನ ಜಾತಕದಲ್ಲಿಯೇ ಬರೆದಿದೆ ಅಂತ ಅಮ್ಮ ಹೇಳಿದ ನೆನಪು.ನಿನ್ನ ಜೀವನಾನೆ ಹೀಗೆ ಕಣೊ,ಒಂದು ರೀತಿ ಜೋಕಾಲಿ ಇದ್ದ ಹಾಗೆ.ಆದರೆ ಇಡೀ ಜೀವನದಲ್ಲಿ ನನಗೆ ಕ್ರಪೆಯಾಗಿ ದೊರಕಿದ್ದು ಮತ್ತು ಜೋಕಾಲಿಗೆ!! ಆಸರೆಯಾಗಿ ಸಿಕ್ಕಿದ್ದ್ದು,ನಿನ್ನ ಪ್ರೀತಿ ಒಂದೇ.
                        ಸವಿ ಸವಿ ನೆನಪು
                        ಸಾವಿರ ನೆನಪು
       ನೆನಪುಗಳೇ ಹೀಗೆ,ಕಡಲ ತೀರಕ್ಕೆ ಕೊನೆಯ ಅಲೆಯೊಂದು ಮೊದಲು ಬಂದು ಅಪ್ಪಳಿಸಿದಂತೆ,ಯಾವುದೋ ದಾರಿ ನನ್ನನ್ನು ಕರೆದುಕೊಂಡು ಹೋದಂತೆ.ಮೌನ ಜಲಪಾತದ ಮದ್ಯೆ ಎರಡು ಹ್ರದಯಗಳ ಸಮಾಗಮ...ನಿನ್ನ ಮೌನ ನಡೆಯ ಕಾಲ್ಗೆಜ್ಜೆಯ ಸದ್ದು ಈ ನೆನಪು.

                      ದಿಲ್ ರೋತಾ ಹೈ ...ಖಭಿ ಖಭಿ ತೆರೆ ಯಾದ ಕರಕೆ
         ನಾವು ಅಂದು ಕೊಂಡಂತೆ ಆಗಿದ್ದರೆ ಇಂದಿಗೆ ನಮ್ಮ ಪ್ರೀತಿಗೆ ಹನ್ನೆರಡು ವರ್ಷ ವಯಸ್ಸು...ಅಂದರೆ ನಮ್ಮ  ಪ್ರೀತಿ ಆರ್ಕುಟ್ ನಸ್ಟು  ಹಳೆಯದು.ಹೌದು ನಾನು,ಸ್ವಲ್ಪ ದಡ್ಡ ನಿಜ ,ಆದರೆ ಕಲಿಕೆಯ ಸಾಮರ್ಥ್ಯ ನನಗೆ ಇದೆ .ಅದು ನಿನಗೂ  ಗೊತ್ತು .ಯಾವ ಇ-ಮೇಲ್ ID ಇಲ್ಲದ ನನಗೆ ಆರ್ಕುಟ್ನಲ್ಲಿ ಒಂದು ID ಖಾತೆಯನ್ನು ಕೊಟ್ಟವಳೇ ನೀನು .
                        


ನಬ್ಬಿಬ್ಬರ ಬೇಟ್ಟಿಯೆ ಒಂದು ಸುಂದರ ಸಮಯ .ನೆನಪಿಸಿಕೊಂಡರೆ ಮನಸ್ಸು ಮನಸ್ಸು ಪ್ರಫುಲ್ಲ .ನೀನು ರಸ್ತೆಯ ಮೇಲೆ ತಲೆ ಕೆಳಗೆ ಮಾಡಿಕೊಂಡು ಹೋಗ್ತಾ ಇದ್ದೆ.ನಾನೇನು ನಿನ್ನನ್ನು ಹಿಂಬಾಲಿಸುತ್ತಿರಲ್ಲಿಲ್ಲ ,ಆದರೆ ನನ್ನ ನಿನ್ನ ಮಾರ್ಗ ಒಂದೆ ಆಗಿತ್ತು  ಅಷ್ಟೆ.ಆದರೆ ಮನೆಯ ಗೇಟನ್ನು ನಿಧಾನವಾಗಿ ಹಾಕಿ ನನ್ನ ಕಡೆ ಒಂದು ವಾರೆ ನೋಟ ಬೀರಿದೆಯಲ್ಲ.!!!..''ದಿಲ್ ಖುಷ್" .ಅಷ್ಟು ಸಾಕಾಗಿತ್ತು  ನಮ್ಮಿಬ್ಬರ ನಡುವೆ ಪ್ರೀತಿ ಮೊಳಗಲು .
              ಆಮೇಲೆನಾಯಿತೋ ಏನೋ ...ಆರ್ಕುಟ್ನಲ್ಲಿ ಸದಾ active ಯಾಗಿರುತ್ತಿದ್ದ ನೀನು ..ಒಮ್ಮಿಂದಲೇ 
ನಿನ್ನ ಅಕೌಂಟಿ ಗೆ ಬೀಗ ಬಿತ್ತು .ಎಷ್ಟು ವರುಷಗಳು ಕಳೆದವು.ಆದರೆ ನೆನಪುಗಳು ಇನ್ನೂ ಬಂದಿಯಾಗಿದ್ದವು.
              ಇಷ್ಟು ವರುಷಗಳು ಕಳೆದ ನಂತರ ನಮ್ಮ ಸ್ನೇಹ ಸೇತುವೆಗೆ ನಾಂದಿ ಹಾಡಿದ್ದು ....ಫೆಸಬುಕ್  ಎಂಬ ಸಂಪರ್ಕ ಜಾಲ .ನಿನಗೆ ಕಳುಹಿಸಿದ ಅದೆಸ್ಟೋ ರಿಕ್ವೆಸ್ಟುಗಳು ..ಹಿಂತಿರುಗಿದವು.ನೀನು ಅವುಗಳನ್ನು ಸಮ್ಮತಿಸುವ ಯಾವ ಲಕ್ಷಣಗಳು ಕಾಣುತ್ತಿಲ್ಲ.ನಿನ್ನ ಕೋಪ ಎಂತಹದು ಅಂತ ನನಗೆ ಗೊತ್ತು ,
        ಒಂದು ಸಾರಿ ಸಮ್ಮತಿಸು ...ಮನಸ್ಸು ತಿಳಿಯಾಗುವುದು.
                                                                                ಇಂತಿ ನಿನ್ನವ ..... 

                                                   ರಾಜು  ಬಾಡಗಿ           



            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ