ಭಾನುವಾರ, ಡಿಸೆಂಬರ್ 30, 2012

HAPPY NEW YEAR--2013

ಹೊಸ ವರುಷ ಬಂದಿದೆ ....ಹರುಷದಿ !!

ಮತ್ತೊಂದು ವರುಷ ಬಂದಿದೆ
ಇನ್ನೊಂದು ಹೊಸ ಹುರುಪಿನ ನೆಪದೊಂದಿಗೆ ..
ನಡೆದದ್ದೇ ದಾರಿ,ಅನ್ನುವವರಿಗೆ..
ಹೊಸ "ನಡೆ " "ನುಡಿಯ"
ಬರವಸೆ ನೀಡುತ್ತಾ ...

     ಕಳೆದು ಹೋದ ದಿನಗಳನ್ನು,ಮೆಲಕು ಹಾಕುತ್ತಾ
      ಕಾಲೆಳೆಯುತ್ತಾ,ತೂಕಡಿಸುತ್ತಾ
     ಸುತ್ತ-ಮುತ್ತ ,ಅತ್ತ ಗಳತ್ತ
     ಕಣ್ಣು ಹಾಯಿಸುತ್ತಾ
     ಅದೇ ಗಡಿಯಾರ ,,
     ಮತ್ತೊಂದು ಬರವಸೆಯ,ಮುನ್ನುಡಿ ಬರೆಯುತ್ತಾ
     ಬಂದಿದೆ ,
     ಹೊಸ ವರುಷ,ಮತ್ತೊಂದು ಹುರುಪಿನೊಂದಿಗೆ ....

ಹಳೆಯ ನೆನಪುಗಳೆನ್ನೆಲ್ಲ ವತ್ತುಗೂಡಿಸಿ
ಅವಳ ನೆನಪೇ ಮತ್ತೆ ಮರುಕಳಿಸಿ
ಆರ್ಥಿಕತೆ ,ಅನಾಚಾರ ,ಅತ್ಯಾಚಾರ ಅನೈತಿಕತೆಯ
ಸಂಕೋಲೆಯ ಸರಮಾಲೆಯನ್ನು ಸಡಿಲಗೊಳಿಸಿ
ಹೊಸ ಶುಭಾಶಯದ ಮುನ್ನುಡಿಯೊಂದಿಗೆ
ಮತ್ತೊಂದು ಬಂದಿದೆ
ಹೊಸ  ವರುಷ
ಹೊಸ ಹುರುಪಿನೊಂದಿಗೆ ...

       ಕ್ಯಾ ಲೆಂಡಿರಿನ ಹನ್ನೆರಡು ಹಾಳೆಗಳ
        ಅಂಕೆ -ಸಂಖ್ಯೆ ಗಳ  ನಡುವೆ ಬಚ್ಚಿಟ್ಟು
       ಪ್ರಳಯದ ಭೀತಿಯ ಮುತ್ತಿಟ್ಟು
       ಭಾವ ಪೂರ್ಣ ಶ್ರದ್ಧಾಂಜಲಿಯ
       ಹನ್ನೆರಡಕ್ಕೆ ವಿಧಾಯ ಹೇಳಿ
       ಅಚಾರ ,ವಿಚಾರ
       ಶೋಧನೆ ,ಸಂಶೋಧನೆಗಳ
        ಬೆನ್ನು ಹತ್ತಿ
        ಅಭೂತ ಪೂರ್ವ ಸ್ವಾಗತಕೋರಿ
         ಬಂದಿದೆ ಹೊಸ ವರುಷ.....ಹುರುಪಿನೊಂದಿಗೆ ...

                                      -----ರಾಜು ಬಾಡಗಿ        
  
                       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ